ಸು. 1250-1308. ರುಡಾಲ್ಫ 1ನ ಮಗ. ಜರ್ಮನಿಯ ದೊರೆ. ತುಂಬ ಸಮರ್ಥನೆಂದು ಹೆಸರು ಪಡೆದಿದ್ದ. ಅವಿಧೇಯರಾಗಿದ್ದ ಸಾಮಂತರ ಪುಂಡಾಟವನ್ನು ಅಡಗಿಸಿ ನಮ್ರತೆಯಿಂದ ವರ್ತಿಸುವಂತೆ ಮಾಡಿದ. ಅವನ ದಾಯಾದಿ ಜಾನ್, ತನ್ನನ್ನು ಸ್ವ್ಯಾಬಿಯದ ಡ್ಯೂಕನನ್ನಾಗಿ ಮಾಡಬೇಕೆಂದು ಕೇಳಿಕೊಂಡಿದ್ದ. ಆಲ್ಬರ್ಟ್ ಅದನ್ನು ನಿರಾಕರಿಸಿದ್ದ. ಈ ಕಾರಣದಿಂದ ಜಾನ್ ಮತ್ಸರವನ್ನು ಬೆಳೆಸಿ ಆಲ್ಬರ್ಟ್ ಹೊಳೆಯನ್ನು ದೋಣಿಯಲ್ಲಿ ದಾಟುತ್ತಿದ್ದಾಗ ಕೊಂದುಹಾಕಿದ. 

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ